"ಅಮ್ಮ ಎಂದರೆ ಏನೋ ಹರುಷವು, ನಮ್ಮಾ ಬಾಳಿಗೆ ಅವಳೇ ದೈವವು....." P B. ಶ್ರೀನಿವಾಸ ಅವರ ಮದುರವಾದ ಕಂಠದಲ್ಲಿ ಮೂಡಿಬಂದ ಹಾಡು. ಇನ್ನೂ ಕೂಡಾ ಈ ಹಾಡು ತುಂಬಾನೇ ಜನಪ್ರಿಯ. ಮೊದಲು ಇದನ್ನು ಮುನ್ನುಡಿಯಾಗಿ ಬಳಸಲು ಕಾರಣವೂ ಇದೆ. ಕಾರಣ ಏನು ಅಂದ್ರೆ ಈಗಿನ ಪೀಳಿಗೆ. ಈಗಿನ ಪೀಳಿಗೆ ಅಮ್ಮ ಅನ್ನೋ ಪದವನ್ನೇ ಮರೆತು ಹೋಗತಾ ಇದ್ದಾರೆ ಈ ಇಂಗ್ಲೀಷ್ ಭಾಷೆಯಿಂದ. ಶಾರ್ಟ್‌ಕಟ್ ಆಗಿ, mum, mom, mumma. Mumma ಅಂತೂ ಎರಡು ಅರ್ಥಗಳನ್ನು ಕೊಡುತ್ತೆ. ಒಂದು ತಾಯಿಯನ್ನ ಕೂಗಿದ ಹಾಗೆ ಎರಡೆನೇಯದು ಊಟವನ್ನು ಕೊಡು ಅಂತಾ.
ಯಾಕೆ ಗೊತ್ತಿಲ್ಲ, ಈಗಿನ ತಾಯಂದಿರಿಗೆ ಕನ್ನಡದಲ್ಲಿ ಅಮ್ಮ ಅಂತ ಕರಿಸ್ಗೊಂಡ್ರೆ ಏನು ಆಸ್ತಿ ಕರಗಿ ಹೋಗುತ್ತಾ? ಮಗು ಅಮ್ಮ ಅಂದ್ರೆ ಸಾಕು, ಎಲ್ಲಿಲ್ಲದ ಕೋಪ. ಎಲ್ಲ ಕೋಪ ತಾಪಗಳನ್ನು ಒಂದು ಮಾಡಿ ಅದಕ್ಕೆ ಹೊಡೆದು Mummy ಅನ್ನು ಅಂತ ಕಲಿಸಿ ಕೊಡತಾರೆ. ಅಮ್ಮ ಅನ್ನೋ ಶಬ್ದಕ್ಕೆ ಈಗಿನ ಕಂಪ್ಯೂಟರ್ ಯುಗದಲ್ಲಿ ಅರ್ಥಾನೇ ಕಳಕೊಳ್ತಾ ಇದೆ ಅನಿಸ್ತಾ ಇದೆ.
ಸರಿ ಅಂತಾ ಗ್ರಾಮೀಣ ಪ್ರದೇಶದಲ್ಲಾದ್ರೂ ನೋಡೋಣಾ ಅಂದ್ರೆ, ಅಯ್ಯೋ ಅದು ನಗರ ಪ್ರದೇಶಕ್ಕಿಂತಾ ತುಂಬಾನೇ ಫಾರ್ವರ್ಡ್. ನಗರದಲ್ಲಿ mumma, mommy, mom ಅಂದ್ರೆ ಗ್ರಾಮಿಣ/ ಹಳ್ಳಿಗಳಲ್ಲಿ ma ಅಂತ ಕರೆಯೋದು ನೋಡಿದೀನಿ. ಖುಷಿಯಾಗಿ ವಬ್ಬಾಕೆಗೆ ಕೇಳಿದೆ, ನೀವಾದ್ರೂ ಹಿಂದಿಯ ma ಶಬ್ದವನ್ನ ಮಕ್ಕಳಿಗೆ ಕಲಿಸಿದ್ರಲ್ಲ ಅಂದ್ರೆ ಅದಕ್ಕೆ ಅವಳು ಅದು ಇಂಗ್ಲಿಷಿನ mommy, mom, mumma ಶಬ್ದಕ್ಕೆ ಶಾರ್ಟ್‌ಕಟ್ ಅಂತ ಹೇಳಿಬಿಡೊದಾ.... ನೋಡಿ ಏನ ಗತಿ ಬಂದಿದೆ ನಮ್ಮ ಕನ್ನಡದ ಅಮ್ಮನಿಗೆ.
ಪುಟ್ಟ ಲೋಹಿತ ಕುಮಾರ್, ಅಂದ್ರೆ ನಮ್ಮ ಅಣ್ಣಾವ್ರ ಮಗ ಪುನೀತ ರಾಜ್‌ಕುಮಾರ್ ಎಷ್ಟು ಸೊಗಸಾಗಿ ತನ್ನ ಚಿಕ್ಕ ಕಂಠದಲ್ಲಿ ಅಮ್ಮನ ಬಗ್ಗೆ ಚೆನ್ನಾಗಿ ವರ್ಣಿಸಿದ್ದಾನೆ. "ಯಾರಿವನು" ಚಿತ್ರದ ಹಾಡು "ಕಣ್ಣಿಗೆ ಕಾಣುವ ದೇವರು ಅಂದರೇ ಅಮ್ಮನೂ ತಾನೇ, ಅಮ್ಮನೂ ತಾನೇ" ದಯವಿಟ್ಟು ಒಮ್ಮೆಯಾದ್ರೂ ಇ ಸೊಗಸಾದ ಹಾಡನ್ನು ಕೇಳಿ. ಲಿಂಕ್ ಇಲ್ಲಿದೆ.
ದಯವಿಟ್ಟು ನಿಮ್ಮ ಅನಿಸಿಕೆಗಳು/ ಅಭಿಪ್ರಾಯಗಳು ಇದ್ದರೆ ತಿಳಿಸಿ. ನನ್ನನ್ನಾ ನಾನು ಇಂಪ್ರೂವ್ ಮಾಡಿಕೊಳ್ಳಬೇಕು ಅಂದ್ರೆ ಅದು ನಿಮ್ಮ ಥ್ರೂ....
ಧನ್ಯವಾದಗಳು,
ಇಂತಿ ಕನ್ನಡಿಗ,
ರವಿ
ಧನ್ಯವಾದಗಳು,
ಇಂತಿ ಕನ್ನಡಿಗ,
ರವಿ