ಈಗ ಕಾಲ ಹೇಗೆ ಬದಲಾಗಿದೆ ಅಂದ್ರೆ, ಅಸಹಿಷ್ಣುತೆ ಅರ್ಥವನ್ನು ಸಹಿಷ್ಣುತೆ ಗೊತ್ತಿಲ್ಲದವರು ಹೇಳಿಕೊಡುತ್ತಿದ್ದಾರೆ. ಯಾವೊಬ್ಬ ಮನುಷ್ಯನು ಒಂದು ಇರುವೆ ಅಥವಾ ಸೊಳ್ಳೆಯನ್ನು ಕೊಲ್ಲದೆ ಇರುವನಾ? ಅದು ಅವನ್ನ ಕಚ್ಚೊಕೆ ಬಂದ್ರೆ ಸುಮ್ನೆ, ಬಾ ಕಚ್ಚಿ ಹೋಗು ಅಂತ ಹೇಳೋಕ್ಕಾಗುತ್ತಾ? ಕಚ್ಚ್ತಾ ಇದ್ದ್ರೆ ಸುಮ್ನೆ ಇರ್ತೀರಾ? ಇಲ್ಲ್ ತಾನೇ. ಅರ್ಥಾ ಆಗಿದೆ ಅಂತ ಅನಕೋತೀನಿ. ಸ್ವಾತಂತ್ರ ನಂತರ ಯಾವ್ದೇ ಪಕ್ಷ ಆಳ್ವಿಕೆ ಇತ್ತೋ ಆವಾಗ್ಲಿಂದ ಈ ಅಸಹಿಷ್ಣುತೆ ಸಹಿಷ್ಣುತೆ ಇದ್ದೇ ಇದೆ. ಇಡೀ ಭಾರತದ ಇತಿಹಾಸವನ್ನು ತೆಗೆದು ನೋಡಿ, ಭಾರತವನ್ನು ಹಿಂದೂಸ್ತಾನ ಎಂದೇ ಕರೆಯಲ್ಪಟ್ಟಿದೆ. ಈಗಲೂ ಎಸ್ಟೋ ಮುಸಲ್ಮಾನ ದೇಶಗಳು ಭಾರತವನ್ನು ಹಿಂದೂಸ್ತಾನ ಎಂದೇ ಕರೀತಾರೆ. ಅಂದ್ರೆ ಭಾರತ ಸಹಿಷ್ಣುತೆಯ ದೇಶ ಅಂದರ್ಥ.
ಈಗಿನ ಪುಟ್ಟಗೋಶಿಗಳು ಇಂದು ನಿನ್ನೆ ಹುಟ್ಟಿದವರು ಅಸಹಿಷ್ಣುತೆ ಬಗ್ಗೆ ಮಾತಾಡ್ತಾ ಇದ್ದಾರೆ. ಇವರಿಗೆ ಯಾರು ಇನ್ನೂ ರುಚಿ ತೋರಿಸಿಲ್ಲ ಅನ್ನಿಸುತ್ತೆ. ಅಸಹಿಷ್ಣುತೆ ಅಂದರೆ ಏನು ಅಂತ. ಬೇವರ್ಷಿಗಳು, ಸುಮ್ನೆ ಇರೋಕ್ಕೆ ಏನ ತೊಂದ್ರೆ ಇವರಿಗೆ. ಒಬ್ಬ ಕಲಾವಿದ ತನ್ನ ಅಭಿಮಾನಿಗಳಿಗೆ ಹುರಿದುಂಬಿಸಬೇಕೆ ಹೊರತು ದೇಶ್ ಬಿಟ್ಟು ಹೋಗುವ ಮಾತನ್ನ ಹೇಳಬಾರದು. ಒಂದು ಸಾರಿ ಭಾರತದಲ್ಲಿ ಎಸ್ಟು ಮಸೀದಿಗಳಿವೆ, ಚರ್ಚುಗಳಿವೆ ಎಣಿಸಿ ನೋಡಿ. ಮತ್ತೆ ಇಡೀ ಪ್ರಪಂಚದಲ್ಲ್ ಎಸ್ಟು ಮಸೀದಿಗಳಿವೆ, ಚರ್ಚುಗಳಿವೆ ಎಣಿಸಿ ನೋಡಿ. ಆವಾಗ ನಿಮಗೆ ಗೊತ್ತಾಗುತ್ತೆ ಭಾರತ ಎಸ್ಟು ದೊಡ್ಡ ಸಹಿಸ್ನುತೆ ರಾಷ್ಟ್ರ ಎಂದು. ಇಡೀ ಪ್ರಪಂಚದ ಮಸೀದಿ, ಚರ್ಚುಗಳಿಗಿಂತ ಭಾರತ ದೇಶದಲ್ಲೇ ಅತಿ ಹೆಚ್ಚಾಗಿ ಇರೋದು. ಇದೆ ಕಾರಣಕ್ಕಾ ಭಾರತ ದೇಶವನ್ನು ಅಸಹಿಷ್ಣುತೆ ದೇಶ ಅಂತ ಕರಿಯೋಧು. ಪಾಕಿಸ್ತಾನಕಿಂತ ಜಾಸ್ತಿ ಮುಸ್ಲಿಮ ಬಂದುಗಳು ಇರೋದು ಭಾರತದಲ್ಲಿ.
ಆದರೆ ನಮ್ಮ ದೇಶದ ಅನ್ನವನ್ನೇ ತಿಂದು ಸರ್ಕಾರದಿಂದ ಪ್ರಶಸ್ತಿ ಪಡೆದು, ಸಿಗುವ ಎಲ್ಲ ಸೌಲತ್ತುಗಳನ್ನು ಅನಿಭವಿಸಿ, ಈಗ ಅಸಹಿಷ್ಣುತೆ ಹೆಸರಿನಲ್ಲಿ ತಮ್ಮ ಪ್ರಶಸ್ತಿ ವಾಪಸಾತಿಯಂಥ ನಾಟಕವಾಡುತ್ತಿದ್ದಾರೆ. ಆದರೆ ಭಾರತ ಒಂದು ಸಹಿಷ್ಣು ರಾಷ್ಟ್ರ ಎನ್ನಲು ಸಾಕಷ್ಟು ಪುರಾವೆಗಳು ಸಿಗುತ್ತವೆ. ಜಗತ್ತಿನ ಯಾವ ರಾಷ್ಟ್ರಗಳಲ್ಲಿಯೂ ಇಲ್ಲದಷ್ಟು ಮಸೀದಿ, ಚರ್ಚಗಳು ಭಾರತದಲ್ಲಿದೆ. ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚಿನ ಮಸೀದಿಗಳಿವೆ. ಆದರೆ ಜಗತ್ತಿನ ಭೇರೆ ಯಾವ ದೇಶದಲ್ಲೂ ಇಷ್ಟೊಂದು ಮಸೀದಿಗಳಿಲ್ಲ. ವಾಷಿಂಗ್ಟನ್ನಿನ್ನಲ್ಲಿ 24 ಚರ್ಚುಗಳಿದೆಯಂದೆ. ಲಂಡನ್ ನಗರದಲ್ಲಿ 71 ಚರ್ಚುಗಳು ಇವೆಯಂತೆ. ಇಟಲಿಯ ಮಿಲಾನಿನಲ್ಲಿ 68 ಇವೆಯಂತೆ. ಆದರೆ
ಬರೀ ದೆಹಲಿಯೊಳಗೆ 271 ಚರ್ಚುಗಳಿವೆ. ಇನ್ನು ಭಾರದ ದೇಶದಾಧ್ಯಂತ ಇನ್ನೆಷ್ಟು ಇರಬೇಡ. ಹೀಗಾಗಿ ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ಭಯದ ವಾತಾವರಣ ಎಲ್ಲಿಯೂ ಇಲ್ಲ. ಹಾಗಾಗಿಯೇ ಅವರಲ್ಲಿ ಸಹೃದಯರಾದ ಕೆಲವು ಮುಸ್ಲಿಂ ಬಾಂದವರು, ಬಾರತದಷ್ಟು ಸಹಿಷ್ಣು ದೇಶ ಇನ್ನೊಂದಿಲ್ಲ. ಅಸಹಿಷ್ಣುತೆ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಹಿಂದೆ ಪಾಕಿಸ್ತಾನದ ಮುಸ್ಲಿಂ ಪ್ರಜೆಗಳೇ ಭಾರತಕ್ಕೆ ವಲಸೆ ಬರುವ ಮಾತಾಡಿದ್ದರು. ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರದ ಜನರು ಭಾರತ ಆಳ್ವಿಕೆ ಬೇಕೆಂದು ದೊಡ್ಡ ಹೋರಾಟವನ್ನೇ ಆರಂಭಿಸಿದ್ದರು. ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡುವ ಶಾರುಕ್ ಖಾನ್ ಅಮೇರಿಕಾಕ್ಕೆ ತೆರಳಿದಾಗ ಖಾನ್ ಎಂದು ಹೆಸರಿರುವುದಕ್ಕೆ ಉಗ್ರ ಎಂದು ಆತನ ಭಟ್ಟೆ ಬಿಚ್ಚಿಸಲಿಲ್ಲವೇ. ಇದು ಅಸಹಿಷ್ಣುತೆ ಎಂದು ಶಾರುಕ್‌ಗೆ ಕಂಡಿಲ್ಲವೇ..? ಆದರೆ ಭಾರತದಲ್ಲಿ ಮಾತ್ರ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿದ್ದರ ಹಿಂದೆ ಏನೋ ಸಂಚಿದೆ ಎಂದೇ ಅರ್ಥೈಸಿಕೊಳ್ಳಬೇಕಲ್ಲವೇ. ಇಷ್ಟು ಆಧಾರ ಸಾಕು ಭಾರತದಲ್ಲಿ ಅಸಹಿಷ್ಣುತೆ ಇಲ್ಲವೆಂದು ಹೇಳಲು.
ಕಳೆದ ಒಂದುವರೆ ವರ್ಷಗಳಿಂದ ಮೋದಿ ಅವರ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎನ್ನುವ ಅಭಿಪ್ರಾಯವಿದೆ. ವಿದೇಶಗಳಿಂದ ಬಂಡವಾಳದ ಹೊಳೆಯೇ ಹರಿದುಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಚೀನಾವನ್ನೇ ಹಿಂದಿಕ್ಕಲು ಹೊರಟಿದೆ. ಅಮೇರಿಕಾದಂಥ ದೇಶ ಕೂಡ ಬಹಿರಂಗವಾಗಿ ಸ್ನೇಹ ಹಸ್ತ ಚಾಚಿದೆ. ಈ ಜೊತೆಗೆ ವಿವಿಧ ದೇಶಗಳು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ನೀಡಲು ಬೆಂಬಲವನ್ನೂ ನೀಡುವ ಭರವಸೆ ನೀಡಿವೆ. ಆದರೆ ಇದೆಲ್ಲ ಬೆಳವಣಿಗೆಗಳು ನಮ್ಮ ನೆರೆಯ ಕೆಲ ದೇಶಗಳ ಜೊತೆಗೆ ದೇಶದ ಅಭಿವೃದ್ಧಿ ಸಹಿಸದ ನಮ್ಮವರೇ ಆದ ಕೆಲವರ ಕಣ್ಣುಕೆಂಪಾಗಿದೆ. ಅಸಹಿಷ್ಣುತೆ ಹುಟ್ಟುಹಾಕಿದ ಜನರಿಗೆ ಜಾಗತಿಕ ಮಟ್ಟದಲ್ಲಿ ನಮ್ಮ ಪ್ರಧಾನಿಯ ವರ್ಚಸ್ಸು, ಮತ್ತು ದೇಶದ ಗೌರವ ಹೆಚ್ಚುವುದು ಬೇಕಿಲ್ಲ. ಇವರಿಗೆ ಭಾತರ ಅಭಿವೃದ್ಧಿ ಹೊಂದಿದರೆ ತಮ್ಮ ಓಟ್ ಬ್ಯಾಂಕ್‌ಗೆ ಹೊಡೆತ ಉಂಟಾಗುವ ಭಯವೂ ಇರಬಹುದು. ಮುಂದೆ ಅಧಿಕಾರವೇ ಸಿಗದೇ ಹೋದರೆ ಎನ್ನುವ ಆತಂಕವೂ ಇರಬಹುದು. ಹೀಗಾಗಿ ಅವರ ಹಿಂಬಾಲಕ ಸಾಹಿತಿಗಳನ್ನು ಎತ್ತಿಕಟ್ಟಿ, ಅವರ ಮೂಲಕ ದಿಕ್ಕೊಂದರಂತೆ ಕಥೆ ಕಟ್ಟಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆಹಾಕಲಾರಂಭಿಸಿದ್ದಾರೆ. ಅಲ್ಲದೇ ಈ ಅಸಹಿಷ್ಣುತೆ ಎನ್ನುವ ಶಬ್ದದ ಮೂಲಕ ತಮಗೆ ಯಾವುದೋ ಕಾಲದಲ್ಲಿ ಸರ್ಕಾರ ನೀಡಿದ ಪ್ರಶಸ್ತಿ ಮರಳಿಸುವಂಥ ಡೋಂಗಿ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ. ಅಸಹಿಷ್ಣುತೆ ಮೂಲಕ ಪ್ರಶಸ್ತಿ ವಾಪಸ್ಸು ನೀಡುತ್ತಿರುವ ಬುದ್ಧಿಜೀವಿಗಳು, ಕಲಾವಿದರು ಪ್ರಶಸ್ತಿ ಪತ್ರವನ್ನು ಮಾತ್ರ ಏಕೆ ಹಿಂದಿರುಗಿದುತ್ತಿದ್ದಾರೆ. ಅವರಿಗೆ ನೀಡಿದ ಇತರ ಸೌಲಭ್ಯದ ಜೊತೆಗೆ ನೀಡಿದ ಇನಾಮನ್ನೂ ಹಿಂದಿರುಗಿಸಬಹುದಿತ್ತಲ್ಲ. ಆದರೆ ಪ್ರಶಸ್ತಿ ಹಿಂದಿರುಗಿಸಿದ ಯಾವೊಬ್ಬನೂ ತನಗೆ ಸರ್ಕಾರ ನೀಡಿದ ಹಣವಾಗಲೀ ಸೈಟ್ ಸೇರಿದಂತೆ ಇರತ ಸೌಲಭ್ಯಗಳಾಗಲೀ ಏಕೆ ಮರಳಿಸಿಲ್ಲ.? ಅಂದರೆ ಇದು ಮರಳಿಸಿದ ತಮಗೆ ಹಿಂದೆ ಪ್ರಶಸ್ತಿ ಕೊಟ್ಟ ಧಣಿಗಳನ್ನು ಮೆಚ್ಚಿಸಲು ತೆಗೆದುಕೊಂಡ ಕ್ರಮ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.
